ಆಲಂಬನ ಪ್ರತ್ಯಯ

ಬೌದ್ಧರ ಪ್ರಕಾರ ಜ್ಞಾನ ಹುಟ್ಟುವುದಕ್ಕೆ ಕಾರಣವಾಗಿರುವ ಪ್ರತ್ಯಯದಲ್ಲಿನ ನಾಲ್ಕು ವಿಧಗಳಲ್ಲೊಂದು. ಸಮನಂತರ, ಸಹಕಾರಿ, ಅಧಿಪತಿ-ಇವು ಉಳಿದ ಮೂರು. ಯಾವ e್ಞÁನ ಹುಟ್ಟಬೇಕಾದರೂ ಅದಕ್ಕೆ ವಿಷಯ ಬೇಕು. ವಿಷಯವಿಲ್ಲದೆ, ಜ್ಞಾನ ಬರುವಂತೆಯೇ ಇಲ್ಲ. ಈ ವಿಷಯಕ್ಕೆ ಆಲಂಬನ ಪ್ರತ್ಯಯ ಎಂದು ಹೆಸರು. (ಹಾಗೆ ಇದಕ್ಕೆ ಆಧಾರವಾಗಿರುವ ಕ್ಷಣಿಕe್ಞÁನಪರಂಪರೆ ಸಮನಂತರಪ್ರತ್ಯಯವೆನಿಸುವುದು. ಬೆಳಕು ಮುಂತಾದುವು ಸಹಕಾರಿಪ್ರತ್ಯಯಗಳು. ಚಕ್ಷುರಾದಿ ಇಂದ್ರಿಯಗಳು ಅಧಿಪತಿ ಪ್ರತ್ಯಯಗಳು). e್ಞÁನ ಯಾವುದನ್ನು ಅವಲಂಬಿಸಿ ಹುಟ್ಟುತ್ತದೆಯೋ ಅದೇ ಆಲಂಬನ (ಸರ್ವದರ್ಶನಸಂಗ್ರಹ). 

ಇದರ ಸತ್ಯಾಸತ್ಯತೆಯನ್ನು ನಿಷ್ಕರ್ಷಿಸುವುದಕ್ಕಾಗಿಯೇ ದಿಜ್‍ನಾಗ ಆಲಂಬನ ಪರೀಕ್ಷಾ ಎಂಬ ಒಂದು ಚಿಕ್ಕ, ಆದರೆ ಪ್ರೌಢವಾದ ಗ್ರಂಥವನ್ನು ಬರೆದಿದ್ದಾನೆ.									
(ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ